ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು 3ನೇ ವಾರ್ಡ್ ಚರಂಡಿಗಳಲ್ಲಿ ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದು, ಕೂಡಲೇ ಹೂಳು ತೆಗೆಸಬೇಕೆಂದು ರೈತ ಸಂಘ ಮತ್ತು ವಾರ್ಡ್ ನಿವಾಸಿಗಳು ಪಿಡಿಓ ಭೋಜೇಶ್ ಗೆ ಸೋಮವಾರ ಮನವಿ ಸಲ್ಲಿಸಿದರು. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ರೈತರು, ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ಗ್ರಾಮದ ಹಾಗೂ ವಿವಿಧ ಬೀದಿಗಳಲ್ಲಿರುವ ಚರಂಡಿಗಳು ಹಲವು ತಿಂಗಳುಗಳಿಂದ ಹೂಳು ತುಂಬಿ ಗಬ್ಬೆದ್ದು ನಾರುತ್ತಿದೆ. ಕೆಲವೆಡೆ ಚರಂಡಿ ಜೊತೆಗೆ ರಸ್ತೆಗಳು ಕೂಡ ನಿರ್ಮಾಣವಾಗಿಲ್ಲ ಎಂದು ಕಿಡಿಕಾರಿದರು.