ಗಣೇಶೋತ್ಸವ ಹಾಗೂ ಈದ್ ಮಿಲಾದ ಹಬ್ಬ ನಿಮಿತ್ತ ಐನಾಪೂರ ಪಟ್ಟಣದಲ್ಲಿ ಗುರುವಾರ ಸಂಜೆ ಕಾಗವಾಡ ಪೊಲೀಸರು ರೂಟ್ ಮಾರ್ಚ್ ನಡೆಸಿದರು.ಈ ಸಮಯದಲ್ಲಿ ಪಿಎಸ್ಐ ರಾಘವೇಂದ್ರ ಖೋತ, ಅಪರಾಧ ವಿಭಾಗದ ಪಿಎಸ್ಐ ಎಂ. ಎ. ಆಳಂದ, ಎಎಸ್ಐ ಬೀರಪ್ಪಾ ಪೂಜಾರಿ, ಎಎಸ್ಐ ಲಕ್ಷ್ಮಣ ಕುಂಬಾರೆ, ಕೆ.ಬಿ ಕಾಂಬಳೆ, ಐಆರಬಿ, ಗೃಹರಕ್ಷಕದಳ , ಕಾಗವಾಡ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.