ನಗರದ ಬುಡಾ ಕಚೇರಿಯ ಬಾಗಿಲು ಬಂದ್ ಮಾಡಿ ಖಾಸಗಿ ಮಾರುಕಟ್ಟೆ ವರ್ತಕರು ಪ್ರತಿಭಟನೆ ನಡೆಸಿದರು. ಕಾನೂನು ಪ್ರಕಾರವಾಗಿ ನಿರ್ಮಿಸಲಾದ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ರಾಜಕೀಯ ಒತ್ತಡಕ್ಕೆ ಮಣಿದು ಬುಡಾ ಆಯುಕ್ತರು ರದ್ದು ಮಾಡಿದ್ದಾರೆ ಎಂದು ವರ್ತಕರು ಆರೋಪಿಸಿದರು. ಈ ನಿರ್ಧಾರವನ್ನು ಖಂಡಿಸಿ ಬುಡಾ ಕಚೇರಿಯ ಬಾಗಿಲು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯನ್ನು ರದ್ದುಪಡಿಸಿರುವುದನ್ನು ಖಂಡಿಸಿ ಸೋಮವಾರ ವರ್ತಕರು ಪ್ರತಿಭಟನೆ ನಡೆಸಿದರು