ನಗರದ ಹೊರವಲಯದಲ್ಲಿರುವ ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 2021-25 ಪದವಿ ಮುಗಿಸಿದ 363 ವಿದ್ಯಾರ್ಥಿಗಳಿಗೆ ಇಂದು ಪದವಿ ಪ್ರಧಾನ ಸಮಾರಂಭ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಬೆಂಗಳೂರು ಸಿ.ಯು.ಎಮ್.ಐ ಟೆಕ್ನಾಲಜೀಸ್ ಕಾರ್ಪೊರೇಟ್ ಟೆಕ್ನಾಲಜಿ ಆಫೀಸರ್ ಶ್ಯಾಮ್ ಎಸ್ ರಾವ್ ಪುಸ್ತಕಗಳನ್ನು ಓದುವುದು ಉತ್ತಮ ಹವ್ಯಾಸವಾಗಿದ್ದು,ಇದರಿಂದ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಲು,ಲೋಕಜ್ಞಾನದ ಅರಿವನ್ನು ಪಡೆಯಬಹುದು ಪದವಿ ಪಡೆದು ಜೀವನದ ಪ್ರಮುಖ ಘಟ್ಟಕ್ಕೆ ತಲುಪಿದ್ದೀರಿ,ನಿಮ್ಮನ್ನು ಅವಲಂಬಿಸಿದವರ ಬಗ್ಗೆ ಕಾಳಜಿ ಇರಲಿ ಅವರಿಗೂ ಮುಖ್ಯವಾಹಿನಿಗೆ ತರಲು ಚಿಂತಿಸಿ ಎಂದರು