ಪ್ರಸಿದ್ಧ ಯಾತ್ರಾಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ಭಕ್ತಸಾಗರವೇ ಹರಿದುಬಂದಿದೆ. ಓಣಂ ರಜೆ ಹಿನ್ನೆಲೆ ಕೇರಳದಿಂದ ಜನರು ಗೋಪಾಲಸ್ವಾಮಿ ಬೆಟ್ಟಕ್ಕೆ ಲಗ್ಗೆ ಇಡುತ್ತಿದ್ದು ತುಂತುರು ಮಳೆ ನಡುವೆಯೂ ಛತ್ರಿಗಳನ್ನು ಹಿಡಿದು ಸರತಿ ಸಾಲಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವುದರಿಂದ ತಪ್ಪಲಿನಿಂದ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಹೋಗಬೇಕಿದ್ದು ಒಂದೆ ಸಮನೇ ಸಾವಿರಾರು ಮಂದಿ ಪ್ರವಾಸಿಗರು ಬಂದಿದ್ದರಿಂದ ತಪ್ಪಲಿನಲ್ಲಿ ಕಿಮೀ ಗಟ್ಟಲೇ ಸರತಿ ಸಾಲು ನಿರ್ಮಾಣವಾಗಿತ್ತು.