ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ವಲಯ ಮಟ್ಟದ 16 ವರ್ಷ ವಯೋಮಿತಿ ಒಳಗಿನ ಕ್ರೀಡಾಕೂಟದಲ್ಲಿ ನಡೆದ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಗಮನ ಸೆಳೆದಿದೆ. ಸ್ಪರ್ಧೆಯಲ್ಲಿ ನಿರ್ಣಾಯಕರು ಪಕ್ಷಪಾತ ತೋರಿದ್ದಾರೆ ಎಂಬ ಆರೋಪ ಹೊರಿಸಿ, ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಡೂರಿನ ಬ್ಲಾಸಂ ಶಾಲೆ ಹಾಗೂ ಹೆದ್ದಾರಿಪುರದ ಶಿವರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು "ಮೋಸದಾಟಕ್ಕೆ ಧಿಕ್ಕಾರ" ಎಂದು ಘೋಷಣೆ ಕೂಗುತ್ತಾ ವೇದಿಕೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.