ಗುಡಿಬಂಡೆ ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಗ್ರಾಮದ ಲೈನ್ ಮೆನ್ ಚಂದ್ರಕುಮಾರ್ ಎಂಬಾತ ರವಿ ಎಂಬ ವಿದ್ಯುತ್ ಕಾರ್ಮಿಕನನ್ನು ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ರವಿ ವಿದ್ಯುತ್ ತಗುಲಿ ಕಂಬದಿಂದ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ. ಬಳಿಕ ಮೃತ ರವಿ ಶವವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತುಹಾಕಿ ಏನು ತಿಳಿಯದಂತೆ ಪರಾರಿಯಾಗಿದ್ದ. ಇತ್ತ ಮೃತ ರವಿ ಸಂಬಂಧಿಕರು ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಲೈನ್ ಮೆನ್ ಚಂದ್ರಕುಮಾರ್ ಮೇಲೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ, ಆತ ಮೊಬೈಲ್ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಆಂಧ್ರಪ್ರದ