ಅರಕೆರೆ ಗ್ರಾಮದ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಮಠದ ಕಳಸಾರೋಹಣ ಹಾಗೂ ದಾಸೋಹ ಮಂದಿರ ಉದ್ಘಾಟನೆಯನ್ನು ಶ್ರೀಮಂದ ಹಿಮವತ್ ಕೇದಾರ ಜಗದ್ಗುರುಗಳು ನೆರವೇರಿಸಿದರು. ಈ ವೇಳೆ ಸಂಗೀತಯುಕ್ತ ಇಷ್ಟಲಿಂಗ ಹಾಗೂ ಧರ್ಮ ಸಮಾರಂಭ ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.