ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದ, ಕೋರ್ಟ್ ಮೆಟ್ಟಿಲೇರಿದ್ದ ಜೋಡಿಯೊಂದು ಶನಿವಾರ ಒಂದಾದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು. ಕಳೆದ 5 ವರ್ಷದ ಹಿಂದೆ ಮದುವೆ ಆಗಿದ್ದ ನಾಗವೇಣಿ ಹಾಗೂ ಸುನೀಲ್ ಕುಮಾರ್ ಎಂಬ ದಂಪತಿಗಳು ಹೊಂದಾಣಿಕೆ ಜೀವನ ಸಾಗಿಸದೆ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಈ ಜೋಡಿಗೆ ಪರಸ್ಪರ ಮನಸ್ತಾಪ ಮರೆತು ಜೀವನ ನಡೆಸುವಂತೆ ಲೋಕಾ ಅದಾಲತ್ ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಅವರು ತಿಳಿಸಿದರು. ಅಂತ್ತಿಮವಾಗಿ ಪರಸ್ಪರ ಭಿನ್ನಾಭಿಪ್ರಾಯ ಮರೆತು ನ್ಯಾಯಾಧೀಶರ ಸಮ್ಮುಖದಲ್ಲಿ ಹೂವಿನ ಮಾಲೆ ಬದಲಿಸಿಕೊಂಡು ಮರು ಮದುವೆಯಾದರು.