ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದ ನಾಯಕರು ಇಂದು ಅಧಿಕಾರದಲ್ಲಿ ಇದ್ದಾರೆ ಹಾಗಾಗಿ ಈ ಯೋಜನೆ ಬಗ್ಗೆ ಮಾತನಾಡಬೇಕಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾದ್ಯಕ್ಷ ರಮೇಶ್ ಗೌಡ ಒತ್ತಾಯಿಸಿದರು. ಶನಿವಾರ ಪಟ್ಟಣದ ಕಾವೇರಿ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನಿಯೋಗ ತಮಿಳುನಾಡಿನ ಸರ್ಕಾರದ ಜೊತೆಗೆ ಮಾತುಕತೆ ಮಾಡಿ ಯೋಜನೆಗೆ ಅನುಮತಿ ಪಡೆಯಬೇಕೆಂದು ಒತ್ತಾಯಿಸಿದರು.