ಪ್ರಂಟ್ ಗ್ಲಾಸ್ ಇಲ್ಲದೇ ಬೆಂಗಳೂರಿಗೆ ಹೊರಟಿದ್ದ ಬಸ್ ಅನ್ನು ಬೆಟಗೇರಿಯಲ್ಲಿ ನಿಲ್ಲಿಸಿ ಬಸ್ ಚಾಲಕ, ನಿರ್ವಾಹಕನಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಬಾದಾಮಿ ಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಖಾಸಗಿ ಬಸ್ ಇದಾಗಿದ್ದು, ಕತ್ತಲಲ್ಲಿ ಪ್ರಂಟ್ ಗ್ಲಾಸ್ ಇಲ್ಲದೇ ಬಸ್ ಅನ್ನು ಚಾಲಕ ಓಡಿಸುತ್ತಿದ್ದ. ಏನಾದರೂ ಹೆಚ್ಚು ಕಡಿಮೆ ಯಾರು ಹೊಣೆ ಅಂತ ಪ್ರಯಾಣಿಕರು ಆಕ್ರೋಶ ಹೊರ ಹಾಕಿದರು. ಖಾಸಗಿ ವಾಹನ ಮಾಲೀಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಟಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.