ಹನೂರು:ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಂಬಾಡಿ ಗ್ರಾಮದಲ್ಲಿ ನೆಡೆಸಲು ಉದ್ದೇಶಿಸಲಾಗಿದ್ದ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾದರು. 17 ವರ್ಷ 1 ತಿಂಗಳ ಅಪ್ರಾಪ್ತ ಬಾಲಕಿ ಜಯಮ್ಮ ಮತ್ತು ಮುನಿಯಪ್ಪ ದಂಪತಿಯ ಮಗಳಾದ ಆಕೆಗೆ, ಅದೇ ಗ್ರಾಮದ ಚೆನ್ನಮ್ಮ ಮತ್ತು ಲೇಟ್ ಚೆನ್ನಯ್ಯರ ಪುತ್ರ ಮಾದೇಶನೊಂದಿಗೆ ಸೆಪ್ಟೆಂಬರ್ 9 ರಂದು ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 1098 ಸಹಾಯವಾಣಿಗೆ ಲಭಿಸಿತು. ಸೂಚನೆ ಲಭಿಸುತ್ತಿದ್ದಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಪೊಲೀಸರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ, ವಿವಾಹವನ್ನು ತಡೆಯುವಲ್ಲಿ ಕ್ರಮ ಕೈಗೊಂಡರು ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿದರು.