ಯಳಂದೂರು: ತಾಲ್ಲೂಕಿನ ಎಳೆಪಿಲ್ಲಾರಿ ದೇವಸ್ಥಾನದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು ತಮಿಳುನಾಡಿನ ಜಯಪ್ರತಾಪ್ (ವಯಸ್ಸು 31) ಎಂದು ಗುರುತಿಸಲಾಗಿದೆ. ದುರ್ಘಟನೆ ಭಾನುವಾರ ಮುಂಜಾನೆ 2ರಲ್ಲಿ ಸಂಭವಿಸಿದ್ದು, ಕಬ್ಬು ತುಂಬಿದ್ದ ಟ್ರ್ಯಾಕ್ಟರ್ (ನಂಬರ್: KA 10 T 6905) ಮತ್ತು ಲಾರಿ ನಂಬರ್ TN 93 B 1779 ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಚಾಲಕ ಜಯಪ್ರತಾಪ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಟ್ರ್ಯಾಕ್ಟರ್‌ನಲ್ಲಿ ಇದ್ದ ಹಾಲ್ಕೆರೆ ಅಗ್ರಹಾರ ಗ್ರಾಮದ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದು, ಅವರನ್ನು ಯಳಂದೂರು ಪೊಲೀಸರು ತಮ್ಮ ವಾಹನದ ಮೂಲಕ ಕೊಳ್ಳೇಗಾಲ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.