ಚಿತ್ರದುರ್ಗ ನಗರದಲ್ಲಿ ಮತ್ತೊಂದು ಕವಾಡಿಗರಹಟ್ಟಿ ದುರಂತ ನಡೆಯುವ ಮುನ್ನ ಸ್ಥಳೀಯ ನಗರಸಭೆ ಎಚ್ಚೆತ್ತುಕೊಳ್ಳಬೇಕು ಎಂದು ಕೆಟಿ ಶಿವಕುಮಾರ್ ಆಗ್ರಹಿಸಿದ್ದಾರೆ. ನಗರದಲ್ಲಿ ಸಂಜೆ 5 ಗಂಟೆಗೆ ಈ ಬಗ್ಗೆ ಮಾತನಾಡಿದ ಅವರು, ಗಾಂಧಿನಗರದ ಬೆಂಗಳೂರು ರಸ್ತೆಯ ಸರ್ವಿಸ್ ರಸ್ತೆಯ ಬದಿಯಲ್ಲಿ ಗಾಂಧಿನಗರ ಮತ್ತು ಕೆಳಗೆ ಬಡಾವಣೆಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಮಾರಿ ಕಣಿವೆಯ ಪೈಪ್ ಲೈನ್ ಹೊಡೆದು ಹೋಗಿ ಹಲವು ದಿನಗಳು ಕಳೆದಿವೆ, ಪೈಪ್ ಲೈನ್ ನಲ್ಲಿ ನಗರದಿಂದ ಬರುವ ಕೊಳಚೆ ನೀರು ಸೇರಿ ಮಲಿನವಾಗುತ್ತಿದ್ದು ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಎಂದರು.