ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ರವಿವಾರ ಮಧ್ಯಾಹ್ನ 12ರ ಸುಮಾರು ಪತ್ರಿಕಾದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಅಧಿಕಾರಕ್ಕೆ ಬಂದ ಮೇಲೆ ಪತ್ರಕರ್ತರ ಶ್ರಮ ಏನೆಂದು ತಿಳಿಯಿತು. ಅಧಿಕಾರಿಗಳಿಗೆ ಸಮಯದ ಒತ್ತಡ ಇರಲ್ಲ, ಆದರೆ ಮಾಧ್ಯಮದವರಿಗೆ ಹಾಗಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸಬೇಕು. ಈ ಕೆಲಸಕ್ಕೆ ಕುಟುಂಬದ ಸಹಕಾರವೂ ಅಗತ್ಯ ಎಂದರು. ಈ ವೇಳೆ ಜಿಪಂ ಸಿಇಒ ಡಾ. ದಿಲೀಶ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಕಾರ್ಯಕ್ರಮದಲ್ಲಿ ಇದ್ದರು.