ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕ ಬೆಂಕಿ ತಗುಲಿ ಐದು ಜಾನುವಾರುಗಳು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಯರಿಕೊಪ್ಪ ಗ್ರಾಮದ ಶಿವಪ್ಪ ಚನ್ನಪ್ಪ ಅಮ್ಮಿನಭಾವಿ ಮತ್ತು ಮಂಜುನಾಥ ಅಮ್ಮಿನಭಾವಿ ಎಂಬುವರಿಗೆ ಸೇರಿದ ಎರಡು ಎತ್ತುಗಳು, ಎರಡು ಹೋರಿಗಳು ಮತ್ತು ಆಕಳ ಕರು ಸಾವನ್ನಪ್ಪಿವೆ.