ಯಾದಗಿರಿ ಜಿಲ್ಲೆಯ ಸುರಪುರ ನಗರದ ಬಿ ಆರ್ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿನ ಸರ್ವೆ ನಂಬರ್ 7/1ರಲ್ಲಿ ಇರುವ ಖಾರಿಜ್ ಖಾತಾ ಭೂಮಿಯನ್ನು ಅಂಬೇಡ್ಕರ್ ಹೆಸರಲ್ಲಿ ಉದ್ಯಾನವನ ಸಾಂಸ್ಕೃತಿಕ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಸರಕಾರ ಮಂಜೂರು ಮಾಡುವಂತೆ ಆಗ್ರಹಿಸಿ ಶಹಾಪುರ ನಗರದ ತಹಸಿಲ್ದಾರ್ ಕಚೇರಿಯ ಮುಂದೆ ಗುರುವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣ ದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ತಹಸಿಲ್ದಾರ್ ಮೂಲಕ ಸಲ್ಲಿಸಲಾಗಿದೆ. ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.