ಹಿರಿಯೂರು ನಗರದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ದಸರಾ ಹಬ್ಬಕ್ಕೆ ಬಾನು ಮುಷ್ತಾಕ್ ಅವರನ್ನ ಆಹ್ವಾನ ಮಾಡಿದ್ದ ಆರಂಭದಲ್ಲಿ ಸಂಸದ ಯಧುವೀರ್ ಅವರು ಸ್ವಾಗತ ಮಾಡಿದ್ರು, ಆದರೆ ಬಿಜೆಪಿ ನಾಯಕರು ಸುಮ್ನೇ ಒಂದು ವಿಷಯ ಬೇಕಂತ ಚರ್ಚೆ ಹುಟ್ಟು ಹಾಕಿದ್ದಾರೆ ಎಂದರು. ಅಲ್ಲದೆ ಬಿ.ಎಸ್. ಯಡಿಯೂರಪ್ಪ ಅವರು 2009 ರಲ್ಲಿ ಅಬ್ದುಲ್ ಕಲಾಂ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದರು ಕವಿ ನಿಸಾರ್ ಅಹಮದ್ ಅವರು ಕೂಡಾ ಆಗಮಿಸಿದ್ದರು. ಅಲ್ದೆ ಜೈನ ಸಮುದಾಯದ ಹಂಪಾ ನಾಗರಾಜ್ ಕೂಡಾ ಅವರನ್ನು ಕರೆದಿದ್ರು. ಆದರೆ ಇದೀಗ ಬಾನು ಮುಷ್ತಾಕ್ ಅವರನ್ನ ವಿರೋಧಿಸುತ್ತಿದ್ದಾರೆ ಎಂದರು.