ಸ್ವ ಪ್ರತಿಷ್ಠೆಗಾಗಿ ಕ್ರೀಡಾಕೂಟ ಮಾಡಿದಂತೆ ತೀರ್ಥಹಳ್ಳಿಯ ವಾಟಗಾರಿನಲ್ಲಿ ನಡೆದ ದಸರಾ ಕ್ರೀಡಾಕೂಟದ ಕಥೆಯಾಗಿದೆ. ಮಕ್ಕಳ ಆರೋಗ್ಯಕ್ಕಿಂತ ತಮ್ಮ ಪ್ರತಿಷ್ಠೆ ಮುಖ್ಯ ಎಂದು ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ ಕಳೆದ ಮೂರು ದಿನಗಳಿಂದ ತೀರ್ಥಹಳ್ಳಿಯಲ್ಲಿ ಮಳೆಯಾಗುತ್ತಿದ್ದರು ಸಹ ದಸರಾ ತಾಲೂಕು ಕ್ರೀಡಾಕೂಟವನ್ನು ಮಾಡಿಯೇ ಸಿದ್ದ ಎಂದು ಹಠ ತೊಟ್ಟು ಅಧಿಕಾರಿಗಳು ಕೂತಂತಿದೆ. ಬುಧವಾರ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು,ಸೆಪ್ಟೆಂಬರ್ 12ರಿಂದ ಮಕ್ಕಳಿಗೆ ಪರೀಕ್ಷೆ ಆರಂಭವಾಗಲಿದೆ ಅದಕ್ಕೂ ಮುನ್ನ ಈ ರೀತಿ ಮಳೆಯಲ್ಲಿ ಆಟವಾಡುವುದರಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಆದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ ಇನ್ನಾದರೂ ಅಧಿಕಾರಿಗಳು ಕ್ರೀಡಾಕೂಟ ನಿಲ್ಲಿಸುತ್ತಾರಾ ಕಾದು ನೋಡಬೇಕಿದೆ.