ಅರೆಸ್ಟ್ ವಾರೆಂಟ್ ಇದ್ದ ಆರೋಪಿಯನ್ನ ವಶಕ್ಕೆ ಪಡೆಯಲು ಬಂದ ಮುಖ್ಯಪೇದೆ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಯನ್ನ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿದ ಪ್ರಕರಣ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಟಿ.ನರಸೀಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ್ ರವರೇ ಹಲ್ಲೆಗೆ ಒಳಗಾದವರು.ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯನ್ನ ಮಂಜುನಾಥ್ ರವರು ಚೇಸ್ ಮಾಡಿ ಹಿಡಿದಿದ್ದಾರೆ.ನಂತರ ಎಎಸ್ಸೈ ಒಬ್ಬರ ನೆರವಿನಿಂದ ಆರೋಪಿಯನ್ನ ನಜರಬಾದ್ ಪೊಲೀಸ್ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಸಂಭಂಧ ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ಮಾಲೀಕ ವಿಜಯೇಂದ್ರ,ಇವರ ಸಹಚರ ಲೋಕೇಶ್ ಹಾಗೂ ಇವರ ಕಾರಿನ ಚಾಲಕ ಭೀಮಯ್ಯ ಎಂಬುವರ ವಿರುದ್ದ ಮಂಜುನಾಥ್ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿ