ಶಿವಮೊಗ್ಗ ಜಿಲ್ಲೆಯ ಸಾಗರದ ಜನ್ನತ್ ನಗರದ ಜೈ ಭುವನೇಶ್ವರಿ ಸಂಘದ ವತಿಯಿಂದ ಗಣಪತಿ ವಿಸರ್ಜನಾ ಮೆರವಣಿಗೆ ಭಾನುವಾರ ನಡೆಯುತ್ತಿದ್ದು, ವಿಸರ್ಜನಾ ಮೆರವಣಿಗೆ ವೇಳೆ ಸ್ಥಳೀಯ ಮುಸ್ಲಿಂ ಮುಖಂಡ ಕೆ ಅಜೀಂ ಹಾಗೂ ಸ್ಥಳಿಯ ನಗರಸಭಾ ಸದಸ್ಯ ಸಹೀನ್ ರವರ ಕುಟುಂಬ ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ದತೆ ಸಾರಿದ್ದಾರೆ