ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಸರಿಯಾದ ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿದ್ದು, ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ. ಶೌಚಾಲಯ ನಿರ್ವಹಣೆಗೆಂದು ನಗರಸಭೆ ಗುತ್ತಿಗೆದಾರಿಗೆ ನೀಡಲಾಗಿದೆ ಆದರೆ ಶೌಚಾಲಯ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಶೌಚಾಲಯ ಬಳಕೆಗೆ ಸಾರ್ವಜನಿಕರಿಂದ ನಿಗಧಿತ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ನಿರ್ವಹಣೆಯ ಕೊರತೆಯಿಂದ ಅಶುಚಿತ್ವದ ವಾತಾವರಣ ಅಸಹ್ಯವನ್ನು ಮೂಡಿಸುತ್ತಿದೆ ಎಂದು ಸುವರ್ಣ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಅವರು ಆಕ್ರೋಶ ವ್ಯಕ್ತಪಡಿಸಿದರು.