ಧರ್ಮಸ್ಥಳದ ಪ್ರಕರಣ ಈಗ ಸಾಕಷ್ಟು ಅನುಮಾನಗಳು ಮುಕ್ತವಾಗಿದೆ. ಮುಸಲ್ಮಾನರು ರಾಷ್ಟ್ರ ದ್ರೋಹಿಗಳ ಸಂಘಟನೆ ಇದರ ಹಿಂದೆ ಇದೆ. ಹೀಗಾಗಿ ಇವರೆಲ್ಲರನ್ನೂ ಒದ್ದು ಒಳಗೆ ಹಾಕಿ ಬಾಯಿ ಬಿಡಿಸಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬುರುಡೆ ಗ್ಯಾಂಗ್ ನ ಎಲ್ಲರಿಗೂ ಮಂಪರು ಪರೀಕ್ಷೆ ನಡೆಸಬೇಕು.ಯಾವ ಯಾವ ಸಂಘಟನೆಗಳು ಇದರ ಹಿಂದೆ ಇದೆ ಎಂಬುದು ಹೊರಬರಬೇಕು ಎಂದರು.