ಪಟ್ಟಣದ ಮುನಿಯಮ್ಮ ಲೇಔಟ್ ನಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ 29ನೇ ವರ್ಷದ ಗಣೇಶ ಹಬ್ಬ ಆಚರಣೆ ತಾಲೂಕಿಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.ಪಟ್ಟಣದಲ್ಲಿ ಗಣೇಶೋತ್ಸವವು ಇಂದು ಕೇವಲ ಒಂದು ವರ್ಗ ಅಥವಾ ಸಮುದಾಯದ ಹಬ್ಬವಾಗದೆ, ಊರ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಸುಮಾರು 13ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಗಣೇಶ ಚತುರ್ಥಿಯ ದಿನವಾದ ಆಗಸ್ಟ್ 27ರಿಂದ ಆಗಸ್ಟ್ 31ರವರೆಗೆ ರವರೆಗೆ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿ ಪ್ರತಿದಿನ ಅನ್ನದಾನವನ್ನು ಸಹ ಏರ್ಪಡಿಸಲಾಗಿತ್ತು.ಗಣೇಶ ಹಬ್ಬದ ದಿನದಿಂದಲೂ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.