ಸೋಮವಾರ ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ ನಟ ಮಡೆನೂರ್ ಮನು, ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆ ಸಮಯದಲ್ಲಿ, ಶಿವರಾಜ್‌ಕುಮಾರ್ ಸೇರಿ ಹಲವು ನಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಮನು ಅವರ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಟೀಕೆಗೂ ಗುರಿಯಾಗಿದ್ದರು. ಇದೀಗ ನೇರವಾಗಿ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸೆಟ್‌ಗೆ ತೆರಳಿದ ಮಡೆನೂರ್ ಮನು, ಶಿವರಾಜ್‌ಕುಮಾರ್ ಕಾರಿನಲ್ಲಿ ಆಗಮಿಸುತ್ತಿದ್ದಂತೆ, ಅವರ ಕಾಲಿಗೆ ಬಿದ್ದು, ಭಾವುಕರಾಗಿ ಕ್ಷಮೆ ಕೇಳಿದ್ದಾರೆ. ಶಿವಣ್ಣ ಕೂಡಾ ಆ ತಪ್ಪನ್ನು ಕ್ಷಮಿಸಿ, ಸಿನಿಮಾ ಕೆಲಸಗಳಿಗೆ ಶುಭ ಕೋರಿದ್ದಾರೆ.