ಮಳವಳ್ಳಿ : ಜ್ವರದಿಂದ ತೀವ್ರ ಅಸ್ವಸ್ಥತಗೊಂಡಿದ್ದ ಯುವತಿ ಯೊಬ್ಬಳು ಆಸ್ಪತ್ರೆಗೆ ಬರುತ್ತಿದ್ದಂತೆ ಸಾವನ್ನಪ್ಪಿದ್ದು ಇದರಿಂದ ಆಕ್ರೋಶಿತ ರಾದ ಯುವತಿಯ ಪೋಷಕರು ವೈಧ್ಯರ ಮೇಲೆ ಹಲ್ಲೆ ನಡೆಸಿರುವುದರ ಜೊತೆಗೆ ಆಸ್ಪತ್ರೆ ಬಾಗಿಲ ಗ್ಲಾಸ್ ಗಳು ಹಾಗೂ ಸಲಕರಣೆಗಳನ್ನು ಧ್ವಂಸಗೊಳಿಸಿ ರುವ ಘಟನೆ ಮಳವಳ್ಳಿ ಪಟ್ಟಣ ದಲ್ಲಿ ಜರುಗಿದೆ. ಮೂಲತಃ ಕೊಳ್ಳೇಗಾಲ ಪಟ್ಟಣದ ವಾಸಿ ಲೇ. ಜಕಾಉಲ್ಲಾ ಎಂಬು ವರ ಮಗಳಾದ 17 ವರ್ಷದ ಶಿಫಾ ಎಂಬಾಕೆಯೇ ಮೃತಪಟ್ಟ ಯುವ ತಿಯಾಗಿದ್ದು ಈಕೆ ಕೊಳ್ಳೇಗಾಲದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿ ದ್ದಳು ಎಂದು ಗೊತ್ತಾಗಿದೆ.