ಎಸ್ ಎಸ್ ಎಲ್ ಸಿ ನಂತರದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಇನ್ ಕ್ಯಾಪ್ ಸೇರಿದಂತೆ ಐದು ಕಂಪನಿಗಳು ಸಹಕಾರ ನೀಡಲು ಮುಂದೆ ಬಂದಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು. ಅವರು ತುಮಕೂರು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ 6.30 ಸಮಯದಲ್ಲಿ ಕೈಗಾರಿಕಾ ಕಂಪನಿಗಳ ಮುಖ್ಯಸ್ಥರು ಹಾಗೂ ಆಸಕ್ತ ಕ್ರೀಡಾಪಟುಗಳ ಜೊತೆ ಮಾತುಕತೆ ನಡೆಸಿ ಅವರಿಗೆ ಬೇಕಾದ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ವಸಂತನರಸಾಪುರ, ಹಿರೇಹಳ್ಳಿ, ಅಂತರಸಹಳ್ಳಿ ಕೈಗಾರಿಕಾ ಪ್ರದೇಶ ಹಲವು ಕಂಪನಿಗಳು ಕ್ರೀಡಾಪಟುಗಳನ್ನ ದತ್ತು ತೆಗೆದುಕೊಳ್ಳುವಂತೆ ಕೋರಿದ್ದೇವೆ ಎಂದರು.