ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆ ನಿರಂತರವಾಗಿ ಮುಂದುವರಿಯುತ್ತಿದೆ. ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ಯೂಟ್ಯೂಬರ್ ಅಭಿಷೇಕ್ ಮತ್ತು ಕೇರಳದ ಮನಾಫ್ ಸೆ.10 ರಂದು ಬೆಳಗ್ಗೆ 11 ಗಂಟೆಗೆ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ. ಎಸ್.ಐ.ಟಿ ತಂಡ ಇವರಿಂದ ಮಾಹಿತಿಗಳನ್ನು ಪಡೆಯುವ ಹಾಗೂ ಹೇಳಿಕೆಗಳನ್ನು ದಾಖಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಅಭಿಷೇಕ್ ಹಾಗೂ ಜಯಂತ್ ಕಳೆದ ಒಂದು ವಾರದಿಂದ ನಿರಂತರವಾಗಿ ವಿಚಾರಣೆಗೆ ಹಾಜರಾದ್ರು.