ಮಂಡ್ಯ : ಈ ದಿನದ ಮಟ್ಟಿಗೆ ತಮ್ಮ ಸ್ಥಾನಗಳನ್ನು ಮರೆತು ರೈತರಾದ ಸ್ವಾಮೀಜಿ ಹಾಗೂ ಅಧಿಕಾರಿಗಳು ಕೆಸರು ಗದ್ದೆಗೆ ಇಳಿದು ನಾಟಿ ಮಾಡಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳು. ಇಂತಹ ಅಪರೂಪದ ಪ್ರಸಂಗ ನಡೆದಿದ್ದು ಮಂಡ್ಯ ತಾಲೂಕಿನ ಅಲಕೆರೆ ಗ್ರಾಮದಲ್ಲಿ. ಸಾಮಾನ್ಯವಾಗಿ ನಮ್ಮ ಹಳ್ಳಿಗಳಲ್ಲಿ ಕೃಷಿ ಕಾರ್ಯಗಳಿಗೆ ಆಳು ಸಿಗದಿದ್ದಾಗ ಮುಯ್ಯಾಳು ಎಂದು ಅಕ್ಕಪಕ್ಕದ ರೈತರನ್ನು ಕರೆದು ಕೊಂಡು ನಾಟಿ ಇನ್ನಿತರ ಕೆಲಸ ಮಾಡಿಕೊಳ್ಳುವುದು ಅವರ ಕೆಲಸ ಬಿದ್ದಾಗ ಇವರು ಹೋಗಿ ಮುಯ್ಯಾಳು ತೀರಿಸುವುದು ವಾಡಿಕೆ ಅದರಂತೆ ಈ ಗ್ರಾಮದ ಚಂದ್ರಣ್ಣ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ನಾಟಿ ಮಾಡಲು ಆಳುಗಳು ಸಿಗದಿದ್ದಾಗ ಮುಯ್ಯಾಳು ಕರೆಸಿಕೊಂಡಿದ್ದರು.