ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಗಾಯಗೊಂಡಿರುವ ಘಟನೆಯ ಶಿವಮೊಗ್ಗ ತಾಲೂಕಿನ ಚಿನ್ಮನೆ ಸಮೀಪದಲ್ಲಿ ಗುರುವಾರ ನಡೆದಿದೆ. ಶಿವಮೊಗ್ಗ ಕಡೆಯಿಂದ ರಿಪ್ಪನ್ ಪೇಟೆ ಕಡೆಗೆ ಕಾರು ತೆರಳುತ್ತಿತ್ತು. ಹೆದ್ದಾರಿಯಲ್ಲಿ ಸಾಗುವಾಗ ಮಾವಿನ ಮರ ಉರುಳಿದ್ದು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಇತರೆ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಯನೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನಾ ಈ ಘಟನೆಯಿಂದ ಕಾರಿನ ಮೇಲ್ಭಾಗ ಸಂಪೂರ್ಣ ಜಖಂ ಆಗಿದೆ.