ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿಶ್ವ ರೈತ ಸಂಘದ ಸದಸ್ಯ ಹಾಗೂ ಪಾರಂಪರಿಕ ನಾಟಿ ವೈದ್ಯರಾದ ಮಹೇಶ್ ಕುಮಾರ್ ಮಾತನಾಡಿ ಆನ್ ಲೈನ್ ಗೇಮಿಂಗ್ ವೇದಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆನ್ ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ 2025 ಕ್ಕೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವುದನ್ನು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಆನ್ ಲೈನ್ ಗೇಮ್ ನಿಯಂತ್ರಣ ಮಸೂದೆಯನ್ನು ಆಯಾ ರಾಜ್ಯಗಳು ಅನುಷ್ಠಾನ ತರಬೇಕು ಎಂದರು.