ಕೇಂದ್ರ ಸರ್ಕಾರ ಈಗಾಗಲೇ ಶೈಕ್ಷಣಿಕವಾಗಿ ಶೇ 10 ರಷ್ಟು ಮೀಸಲಾತಿ ನೀಡಿದ್ದರು ಜಾತಿ ಪ್ರಮಾಣ ಪತ್ರದಲ್ಲಿ ಉಪ ಜಾತಿ ಇಲ್ಲದಿರುವುದರಿಂದ ಸವಲತ್ತು ಪಡೆಯಲು ಒಕ್ಕಲಿಗ ಸಮುದಾಯದವರು ವಿಫಲರಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿ ಸಂದರ್ಭದಲ್ಲಿ ಜಾತಿಯ ಜೊತೆಗೆ ಉಪ ಜಾತಿಯನ್ನು ನಮೂದಿಸಬೇಕು ಎಂದು ಆರೆ ಶಂಕರ ಮಠದ ಸಿದ್ದರಾಮೇಶ್ವರ ಚೈತನ್ಯ ಸ್ವಾಮೀಜಿ ಹೇಳಿದರು.ಅವರು ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಧ್ಯಾಹ್ನ 12:30 ಸಮಯದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಬಳಿಕ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಒಕ್ಕಲಿಗ ಸಮುದಾಯದವರು ಎಚ್ಚೆತ್ತುಕೊಳ್ಳಬೇಕಾಗಿದೆ.