ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಸಂಕಷ್ಟ ಹರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೌರಿ ಹಬ್ಬದ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ದೃಶ್ಯ ಕಂಡು ಬಂದಿದೆ. ಇನ್ನೂ ದೇವಸ್ಥಾನವನ್ನ ಸಂಪೂರ್ಣ ದೀಪಾಲಂಕಾರ ಮಾಡಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ವಿಶೇಷವಾಗಿ ಐದು ಅಡಿ ಎತ್ತರದ ಗೌರಿ ದೇವಿಯ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದು ಬಣ್ಣದ ಹೂಗಳಿಂದ ದೇವರನ್ನ ಸಿಂಗರಿಸಲಾಗಿದೆ.