Download Now Banner

This browser does not support the video element.

ತಿಪಟೂರು: ಹೊನ್ನವಳ್ಳಿಯಲ್ಲಿ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು

Tiptur, Tumakuru | Sep 7, 2025
ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಬಾಲಕ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ದುರಂತ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ. ಈ ದುರ್ಘಟನೆ ಶನಿವಾರ ಮಧ್ಯಾಹ್ನ 3 ರ ಸಮಯದಲ್ಲಿ ನಡೆದಿದೆ. ಹೊನ್ನವಳ್ಳಿ ಸರ್ಕಾರಿ ಶಾಲೆಯ 9ನೇ ತರಗತಿಯ 14 ವರ್ಷದ ಜೀವನ್ ಮೃತಪಟ್ಟ ಬಾಲಕ ನಾಗಿದ್ದಾನೆ. ಗ್ರಾಮದಎಲ್ಲಮ್ಮನ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಜೀವನ್ ಭಾಗವಹಿಸಿದ್ದ ಬಳಿಕ, ಹೊನ್ನವಳ್ಳಿ ಗ್ರಾಮದ ಸಮೀಪದ ಏರಿಕೆರೆಸ್ನೇಹಿತರೊಂದಿಗೆ ಹೋಗಿದ್ದಾನೆ. ಇಲ್ಲಿ ಈಜಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇತ್ತೀಚೆಗೆ ಕೆರೆಯ ಉಳು ತೆಗೆದ ಕಾರಣ, ಕೆರೆಯ ಆಳವು 20 ಅಡಿಗೆ ಹೆಚ್ಚಾಗಿತ್ತು ಜೀವನ್ ಆಳದ ನೀರಿನಲ್ಲಿ ಮುಳುಗಿ ಕೇಸರಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
Read More News
T & CPrivacy PolicyContact Us