ಖಗ್ರಾಸ ಚಂದ್ರಗ್ರಹಣ ಹಿನ್ನಲೆ ಕೋಲಾರದ ದೇವಸ್ಥಾನಗಳು ಬಂದ್ ಆಗಿವೆ.ಸಂಜೆಯಿಂದಲೆ ದೇವಸ್ಥಾನಗಳು ಬಂದ್ ಆಗಿದ್ದು,ಸಾರ್ವಜನಿಕರಿಗೆ ದರ್ಶನವಿಲ್ಲ.ಜಿಲ್ಲೆಯ ಮುಜರಾಯಿ ವ್ಯಾಪ್ತಿಯಲ್ಲಿ ಇರುವ ಎಲ್ಲ ದೇವಸ್ಥಾನ ಗಳು ಬಾಗಿಲು ಮುಚ್ಚಿವೆ.ಭಾನುವಾರ ರಾತ್ರಿ 9:55ಕ್ಕೆ ಗ್ರಹಣ ಸ್ಪರ್ಷ ಕಾಲವಾಗಿದ್ದು,ಇಂದು ರಾತ್ರಿ 9:55ರಿಂದ ಮಧ್ಯ ರಾತ್ರಿ 1:30ರವೆಗು ಚಂದ್ರ ಗ್ರಹಣ ಇರುವುದರಿಂದ,ಸೋಮವಾರ 5ಗಂಟೆಗೆ ದೇವಸ್ಥಾನ ಗಳನ್ನು ಶುಚಿ ಗೊಳಿಸಿ 9ಗಂಟೆಗೆ ವಿಶೇ ಅಭಿಷೇಕ,ಪೂಜೆ ಇರಲಿದೆ.ಸೋಮವಾರ ನಗರದ ಸೋಮೇಶ್ವರ ದೇವಸ್ಥಾನದ ಲ್ಲಿ ವಿಶೇಷ ಪೂಜೆಗಳಿದ್ದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಚಂದ್ರಗ್ರಹಣದಿಂದ ದೋಷವಿರುವ ರಾಶಿಗಳ ವಿಶೇಷ ಪೂಜೆಗೆ ಭಕ್ತರು ಮುಂದಾಗಿದ್ದಾರೆ.