ಕೊಪ್ಪಳ ನಗರದಲ್ಲಿ ಈದ್ ಮಿಲಾದ್ ನಿಮಿತ್ತ ಮುಖ್ಯ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸೆಪ್ಟೆಂಬರ್ 05 ರಂದು ಮಧ್ಯಾಹ್ನ 2-00 ಗಂಟೆಗೆ ಮುಸ್ಲಿಂರು ಉತ್ಸಾಹದಿಂದ ಮೇರವಣಿಗೆಯಲ್ಲಿ ಪಾಲ್ಗೊಂಡ ಗಮನ ಸೇಳೆಯಿತು. ಈ ಮೆರವಣಿಗೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಧಾರ್ಮಿಕ ನಿಷ್ಠೆ, ಭಕ್ತಿಯ ಸಂದೇಶವನ್ನು ಸಾರಿದರು. ಮೆರವಣಿಗೆಯ ವೇಳೆ ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಯಿತು. ಧಾರ್ಮಿಕ ನಾಯಕರು ಮತ್ತು ಸಮುದಾಯದ ಪ್ರಮುಖರು ಹಬ್ಬದ ಕುರಿತು ತಿಳಿಸಿದರು.