ದಾವಣಗೆರೆ ಜಿಲ್ಲೆಯ ಹರಿಹರ ನಗರದ ಬಜಾರ ಮೊಹಲ್ಲಾ ವಾಸಿಯಾದ ಅಬ್ದುಲ್ ವಾಹಿದ್ ತಮ್ಮ ಬೈಕ್ ಕಳ್ಳತನವಾದ ಬಗ್ಗೆ ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಹರಿಹರ ನಗರದ ವಾಸಿಯಾದ ಚಂದ್ರು.ಎನ್,ಸೈಯದ್ ಹಫೀಜ್, ತೌಶೀಪ್ ಅಹಮ್ಮದ್ ಎಂಬ ಮೂವರನ್ನು ಬಂಧಿಸಿದ್ದು, 2.55 ಲಕ್ಷ ರೂ ಬೆಲೆಯ 8 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ದಾವಣಗೆರೆ ನಗರದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.