ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಪ್ಪ ತಾಲೂಕಿನ ಅರಳಿಕೊಪ್ಪ ಗ್ರಾಮದ ಪೂರ್ಣೇಶ್ ಎಂಬ ರೈತರ ತೋಟಕ್ಕೆ ನುಗ್ಗಿರುವ ಕಾಡಾನೆ ನೂರಾರು ಅಡಕೆ ಮರಗಳನ್ನ ನೆಲಸಮ ಮಾಡಿದೆ. 30 ವರ್ಷಕ್ಕೂ ಹೆಚ್ಚು ಪ್ರಾಯವುಳ್ಳ ಅಡಕೆ ಮರಗಳು ಪೀಸ್ ಪೀಸ್ ಆಗಿ ನೆಲಕ್ಕೆ ಬಿದ್ದಿರುವುದನ್ನು ಕಂಡು ಇಡೀ ಅರಳಿಕೊಪ್ಪ ಗ್ರಾಮವೇ ಕಂಬನಿ ಮಿಡಿದಿದೆ.