ಚಿಂತಾಮಣಿ ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಸೇವಾ ಪಾಕ್ಷಿಕ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ಜಿಎನ್ ವೇಣುಗೋಪಾಲ್ ಮಾತನಾಡಿ ದಿನದ 18 ಗಂಟೆ ಕಾಲ ಕಾರ್ಯ ನಿರ್ವಹಿಸುವುದರ ಮೂಲಕ ದೇಶವನ್ನು ಉತ್ತುಂಗಕ್ಕೆ ಏರಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಉಜ್ವಲ ಭವಿಷ್ಯತ್ತಿಗಾಗಿ ದುಡಿಯುತ್ತಿದ್ದಾರೆಂದು ನುಡಿದರು. ಇಲ್ಲಿನ ಕಾಂಗ್ರೇಸ್ ಸರ್ಕಾರ ದೇಶವನ್ನು ಹೊಡೆಯುವ ಹುನ್ನಾರದಲ್ಲಿ ಹಿಂದೂ, ಹಿಂದೂ ಧರ್ಮ, ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ನಿರ್ವಹಿಸುತ್ತಿದ್ದು, ಕಿಶ್ಚಿಯನ್ನರು, ಮುಸ್ಲಿಂರು ಹಿಂದೂಗಳನ್ನು ಮತಾಂತರ ಮಾಡುವ ಮೂಲಕ ಹಿಂದೂಗಳನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆಂದು ಗುಡುಗಿದರು.