ಗಣೇಶ ಹಬ್ಬದ ಪ್ರಯುಕ್ತವಾಗಿ ವಿಜಯಪುರ ನಗರದಲ್ಲಿ ಬುದುವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಗಣೇಶ ವಿಗ್ರಹ ಖರೀದಿ ನಗರದಲ್ಲಿ ವಿಜೃಂಭಣೆಯಿಂದ ಜರಗಿತು. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ನೂರಾರು ಮಳಿಗೆಗಳಲ್ಲಿ ಗಣೇಶ ವಿಗ್ರಹ ಮಾರಾಟ ಅದ್ದೂರಿಯಾಗಿ ಜರುಗಿತು. ಸಾರ್ವಜನಿಕರು ಗಣೇಶನನ್ನು ಖರೀದಿ ಮಾಡಿ ಬಾಳೆದಿಂಡು ಹಣ್ಣು ಹಂಪಲು ಖರೀದಿ ಮಾಡಿ ಭವ್ಯ ಮೆರವಣಿಗೆಯೊಂದಿಗೆ ಗಣಪತಿ ಬಪ್ಪ ಮೌರ್ಯ ಘೋಷವಾಕ್ಯದೊಂದಿಗೆ ಮನೆಗೆ ತೆರಳಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಹಬ್ಬದ ಗಣೇಶ ಮೂರ್ತಿ ಖರೀದಿ ಅದ್ದೂರಿಯಾಗಿ ಜರುಗಿತು.