ಬಾಗೇಪಲ್ಲಿ: ಕೃಷ್ಣಾಜನ್ಮಾಷ್ಠಮಿ ಪ್ರಯುಕ್ತ : ಶ್ರೀ ಶ್ರೀ ನಂದಗೋಕುಲ ಯಾದವ ಸಂಘದಿoದ ಭಾನುವಾರ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಶ್ರೀಕೃಷ್ಣ ಮೂರ್ತಿಯ ಮೆರವಣಿಗೆ ನಡೆಯಿತು. ಪಟ್ಟಣದ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ಶ್ರೀ ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ವಿವಿಧ ಹೂವುಗಳಿಂದ, ವಿದ್ಯುತ್ ದೀಪಾಲಂಕಾರ ಹಮ್ಮಿಕೊಳ್ಳಲಾಗಿತ್ತು. ೭ ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ, ಸಂಜೆ ಶ್ರೀಕೃಷ್ಣನ ಗೀತೋಪದೇಶ, ಪ್ರವಚನಗಳ ಹಾಗೂ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ, ತಾಲ್ಲೂಕಿನ ಗ್ರಾಮಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶದ ಗೋರಂಟ್ಲ, ಧರ್ಮಾವರಂ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಭಕ್ತರು ಪೂಜಾ ಕೈಂಕಾರ್ಯಗಳಲ್ಲಿ ಭಾಗವಹಿಸಿದ್ದರು.