ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡಾದಲ್ಲಿ ಕುಂಬಳಕಾಯಿ ಎಂದು ಸರ್ಪದ ಆಕಾರದಲ್ಲಿ ಕಂಡುಬಂದಿದ್ದು ಸಾಕ್ಷಾತ್ ಭಾಗ್ಯವಂತಿ ದೇವಿಯೇ ನಮ್ಮ ತಾಂಡದಲ್ಲಿ ಪ್ರತ್ಯಕ್ಷವಾಗಿದ್ದಾಳೆ ಎನ್ನುವ ನಂಬಿಕೆಯಲ್ಲಿ ತಾಂಡಾದ ಜನತೆ ಕುಂಬಳಕಾಯಿಗೆ ದೇವಸ್ಥಾನ ಕಟ್ಟಿಸಲು ಮುಂದಾಗಿ ,ಗ್ರಾಮದಲ್ಲಿನ ಸಂತ ಸೇವಾಲಾಲ ಮಂದಿರ ದಿಂದ 251 ಕುಂಭ ಕಳಸಗಳ ಮೆರವಣಿಗೆಯೊಂದಿಗೆ ಗಂಗಾ ಪೂಜೆಯ ಮೂಲಕ ಅಗಸಿ ಬಳಿಯಲ್ಲಿನ ಕುಂಬಳಕಾಯಿ ಇರುವ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ಭಕ್ತಿ ಪರವಶರಾದ ಭಕ್ತರು ದೈವ ಹೇಳಿಕೆಯನ್ನು ನೀಡಿರುವ ಘಟನೆ ನಡೆದಿದ್ದು,ಸಾವಿರಾರು ಜನ ಭಾಗವಹಿಸಿದ್ದರು.