Download Now Banner

This browser does not support the video element.

ಚಾಮರಾಜನಗರ: ನಗರದಲ್ಲಿ ಗೌರಿಹಬ್ಬ ಸಡಗರ, ಕರಿಮಣಿ ಮೇಲೆ ಬಂದ ಸ್ವರ್ಣಗೌರಿ

Chamarajanagar, Chamarajnagar | Aug 26, 2025
ಹಿಂದೂಗಳ ಅತೀ ದೊಡ್ಡ ಹಬ್ಬವಾದ ಗೌರಿ-ಗಣೇಶ ಹಬ್ಬದ ಸಡಗರ ಗಡಿಜಿಲ್ಲೆಯಲ್ಲಿ ಜೋರಾಗಿದ್ದು ಸ್ವರ್ಣಗೌರಿಗೆ ಗೌರಿಬಾಗಿನ ಅರ್ಪಿಸಿ ನೂರಾರು ಮಂದಿ ಮಹಿಳೆಯರು ಸಂಭ್ರಮಿಸಿದರು. ಈ ಬಾರಿ ಕರಿಮಣಿ ಮೇಲೆ ಗೌರಿ ಬಂದಿದ್ದು ಸುಮಂಗಲಿಯರಿಗೆ ಒಳಿತಾಗಲಿದೆ, ನಾಡಿಗೆ ಸಮೃದ್ಧಿ ತರಲಿದೆ ಎಂಬುದು ಮತ್ತಷ್ಟು ಹರ್ಷಕ್ಕೆ ಕಾರಣವಾಗಿದೆ. ಚಾಮರಾಜೇಶ್ವರ ದೇಗುಲದಲ್ಲಿ ಸ್ವರ್ಣಗೌರಿ ಮೂರ್ತಿಯು ಈ ಬಾರಿ ಕರಿಮಣಿ ಮೇಲೆ ಬಂದಿದ್ದು ಸುಮಂಗಲಿಯರಿಗೆ ಒಳಿತಾಗಲಿದೆ, ಯುವತಿಯರಿಗೆ ಕಂಕಣಭಾಗ್ಯ ಕೂಡಿ ಬರಲಿದ್ದು ನಾಡಿಗೆ ಸಮೃದ್ಧಿಯ ಸಂಕೇತವಾಗಿದೆ ಎಂದು ಅರ್ಚಕ ರಾಮಕೃಷ್ಣ ಭಾರದ್ವಾಜ್ ಮಾಧ್ಯಮದವರೊಂದಿಗೆ ತಿಳಿಸಿದರು.
Read More News
T & CPrivacy PolicyContact Us