ಗದಗ-ಬೆಟಗೇರಿ ಅವಳಿ ನಗರದಲ್ಲಿ ಥರ್ಡ್ ಐ ಕ್ಯಾಮರಾ ಕಣ್ಣಿಗೆ ಬಿದ್ದು ದಂಡದ ನೋಟಿಸ್ ಮನೆಗೆ ಬಂದಿರುತ್ತಿತ್ತು. ಇದೀಗ ಪೊಲೀಸರು ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದ್ದು, ಶೇ. 50% ರಿಯಾಯಿತಿ ದರದಲ್ಲಿ ದಂಡವನ್ನು ಪಾವತಿಸಲು ಇಂದೇ ಕೊನೆಯ ದಿನ ಆಗಿದೆ. ದಂಡದ ನೋಟಿಸ್ ಬಂದಿದ್ದ ಸವಾರರು ಬೇಗ ಬೇಗನೆ ದಂಡವನ್ನು ಕಟ್ಟಿ, ಹಣವನ್ನು ಉಳಿತಾಯ ಮಾಡಿಕೊಳ್ಳಬೇಕು ಅಂತ ಶಹರ ಪೊಲೀಸ್ ಠಾಣೆಯ ಪಿಎಸ್ಐ ಆರ್. ಆರ್ ಮುಂಡವಾಡಗಿ ತಿಳಿಸಿದ್ದಾರೆ.