ಮೊಳಕಾಲ್ಮುರು:-ರಾಯಾಪುರ ಗ್ರಾಮದಲ್ಲಿ ಮಂಗಳವಾರದಂದು ಮಾರಮ್ಮನ ಹಬ್ಬ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷ ಗೌರಸಮುದ್ರ ಮಾರಮ್ಮನ ದೊಡ್ಡ ಜಾತ್ರೆಯಾದ ಒಂದು ವಾರದ ನಂತರ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಮೊದಲಿಗೆ ಊರು ಮಾರಮ್ಮನ ದೇವಸ್ಥಾನದಿಂದ ಗೌರಸಮುದ್ರ ಮಾರಮ್ಮ ದೇವಿಯ ವಿಗ್ರಹವನ್ನು ನಾನಾ ಧಾರ್ಮಿಕ ಆಚರಣೆಗಳನ್ನು ಅನುಸರಿಸಿ ಮೆರವಣಿಗೆಯ ಮುಖಾಂತರ ಗ್ರಾಮದ ಹೊಸ ಕಪಿಲೆಯ ಗೌರಸಮುದ್ರ ಮಾರಮ್ಮನ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಯಿತು,