ಆಗಸ್ಟ್ 28 ರ ಗುರುವಾರ ಬೆಳ್ಳಂಬೆಳಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು, ತರಕಾರಿ ಮಾರಾಟಗಾರರಾದ ಮಹಮ್ಮದ್ ಇಖ್ಬಾಲ್ ಅವರನ್ನ ಮಾತನಾಡಿಸಿ, ತರಕಾರಿ ತೂಗಿ ಮಾರುಕಟ್ಟೆಯಲ್ಲಿನ ತೂಕದ ಯಂತ್ರದ ಪರಿಶೀಲಿಸಿದರು. ಹಮಾಲಿಗಳೊಂದಿಗೆ ಮಾತನಾಡಿ ಇನ್ಶೂರನ್ಸ್ ಮಾಡಿಸಿದ್ದೀರಾ? ಪ್ರತಿ ದಿನ ಎಷ್ಟು ಸಂಪಾದನೆ ಮಾಡ್ತೀರಾ? ಎಂದು ಕೇಳಿದರು. ಎಪಿಎಂಸಿ ಬೈಲಾದಂತೆ ಪಾರ್ಮ 25 ಸರಿಯಾಗಿ ಪಾಲನೆಯಾಗಬೇಕು. ಹಮಾಲಿಗಳಿಗೆ ಕಡ್ಡಾಯ ರಿಜಿಸ್ಟರ್ ಮಾಡಿಸಿ, ಫೋಟೊ, ದಾಖಲಾತಿ ಇಟ್ಟುಕೊಳ್ಳಿ. ಅವರಿಗೆ ಪಿಎಫ್, ವಿಮೆ ಸಿಗುವ ಹಾಗೆ ವ್ಯವಸ್ಥೆ ಮಾಡಿ. ಇಲ್ಲದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.