ವರಕವಿ ಡಾ.ದ.ರಾ ಬೇಂದ್ರೆಯವರ ಸಾಹಿತ್ಯವನ್ನು ಯುವ ಜನತೆ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದು ನಿವೃತ್ತ ಶಿಕ್ಷಕ ಸುರೇಶ್ ಕುಲಕರ್ಣಿ ತಿಳಿಸಿದರು. ನಗರದ ರಂಗಾಯಣ ಸಮುಚ್ಚಯ ಸಭಾಭವನದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಆಯೋಜಿಸಿದ್ದ ಶ್ರಾವಣದ ಕವಿ ಬೇಂದ್ರೆ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರಕವಿ ಬೇಂದ್ರೆ ಅವರು ತಮ್ಮ ಜೀವನದ ಉದ್ದಕ್ಕೂ ಕನ್ನಡದ ಕೆಲಸ ಮಾಡಿದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ ಎಂದರು.