ಕಲಬುರಗಿ : ಎಲ್ಲಿವರೆಗೆ ಮೋಸ ಹೋಗುವರು ಇರ್ತಾರೋ ಅಲ್ಲಿವರೆಗೆ ಮೋಸ ಮಾಡುವರು ಇರ್ತಾರೆ ಅನ್ನೊದಕ್ಕೆ ಈ ಸುದ್ದಿಯೇ ಸಾಕ್ಷಿ.. ಹೌದು. ಕಲಬುರಗಿ ನಗರದ ಕೊಠಾರಿ ಭವನದ ಹಿಂಬದಿಯ ಮಹಾವೀರ ನಗರ ಬಡಾವಣೆ ನಿವಾಸಿಯೊಬ್ಬರಿಗೆ ಸೈಬರ್ ವಂಚಕರು ₹23.90 ಲಕ್ಷ ರೂ ವಂಚಿಸಿದ ಘಟನೆ ನಡೆದಿದ್ದು, ಸೆ5 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಮುಂಬಯಿನ ಇನ್ಫ್ರಾ ಪ್ರಾಜೆಕ್ಟ್ ಕಂಪನಿಯ ನಿವೃತ್ತ ನೌಕರ ಪ್ರಹಲಾದ್ ಕುಲಕರ್ಣಿ ಹಣ ಕಳೆದುಕೊಂಡವರು. ಸೈಬರ್ ವಂಚಕರು A1-IIFL capital Wealth Management ಎಂಬ ವಾಟ್ಸಪ್ ಗ್ರೂಪ್ ಮಾಡಿ ಮನಿ ಡಬ್ಲಿಂಗ್ ಆಸೆ ತೋರಿಸಿದ್ದು, ಅವರ ಮಾತು ನಂಬಿ ಇದೀಗ ಪ್ರಹ್ಲಾದ್ ಕುಲ್ಕರ್ಣಿ ₹23.90 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.