*ರಸ್ತೆ ಹಳ್ಳದಿಂದ ದುರಂತ – ಕಾರು, ಲಗೇಜ್ ಆಟೋ ನಡುವೆ ಭೀಕರ ಅಪಘಾತ, ಮೂವರು ಗಂಭೀರ ಗಾಯ – ನಿಮಾನ್ಸ್ ಆಸ್ಪತ್ರೆಗೆ ರವಾನೆದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ–ಮೆಳೇಕೋಟೆ ರಸ್ತೆಯ ಕಾಚಹಳ್ಳಿ ಸಮೀಪ, ರಸ್ತೆಯಲ್ಲಿ ಬಿದ್ದಿರುವ ಆಳವಾದ ಹಳ್ಳ ಹಾಗೂ ಕೆರೆಯ ಕಟ್ಟೆಯ ಬಳಿ ಉಂಟಾದ ಅಸಮರ್ಪಕ ರಸ್ತೆ ಪರಿಸ್ಥಿತಿ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಶನಿವಾರ ಮಧ್ಯಾಹ್ನ ಕಾರು ಮತ್ತು ಲಗೇಜ್ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಳನೀರು ತರಲು ಆಟೋದಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎ