ನಾಳೆ ಸಾಗರ ನಗರದಲ್ಲಿ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಬುಧವಾರ ಸಂಜೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿರುವ ಎಸ್ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಸಾಗರ ನಗರದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಈ ಪಥ ಸಂಸಾರನ ಸಾಗರದ ಎಸ್.ಎನ್. ಸರ್ಕಲ್ ನಿಂದ ಪ್ರಾರಂಭವಾಗಿ ಎಕ್ಸ್ ಸರ್ಕಲ್, ಅಶೋಕ ರಸ್ತೆ, ಸಾಗರ್ ಸರ್ಕಲ್, ಮಾರಿಗುಡಿ,ಐತಪ್ಪ ಸರ್ಕಲ್, ಲಿಂಬು ಸರ್ಕಲ್, ತಿಲಕ್ ರಸ್ತೆ, ಸಾಗರ್ ಸರ್ಕಲ್ ಮುಖಾಂತರ ಗಾಂಧಿ ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು.